== ಚೆಕ್ ಪುಸ್ತಕ == ಚೆಕ್ ಪುಸ್ತಕ ಎಂಬುದು ಒಂದು ದಸ್ತವೇಜು. ಬ್ಯಾಂಕಿಗೆ ಇದು ಒಂದು ಆದೇಶ ಪತ್ರ. ಒಬ್ಬ ವ್ಯಕ್ತಿ ತನ್ನ ಖಾತೆಯಲ್ಲಿರುವ ಮೊತ್ತವನ್ನು ವ್ಯಕ್ತಿಗೆ ಪಾವತಿಸಲು ಬ್ಯಾಂಕಿಗೆ ನೀಡುವ ಆದೇಶ. ಒಂದು ಚೆಕ್ ಹಾಳೆಯ ಮುಖಾಂತರ ಖಾತೆಯಿಂದ ಹಣವನ್ನು ಪಡೆಯಬೇಕಾದರೆ ಈ ಕೆಳಗಿನ ಅಂಶಗಳನ್ನು ಪರಿಶೀಲಿಸಿ ಬ್ಯಾಂಕ್ ಹಣವನ್ನು ನೀಡಲಾಗುವುದು ಅವು ಯಾವುದೆಂದರೆ ಖಾತೆದಾರರಹಸ್ತಾಕ್ಷರ. ವ್ಯಕ್ತಿಯಖಾತೆ. ಹಣದ ಮೊತ್ತದ ಅಂಕೆ ಮತ್ತು ಅಕ್ಷರಗಳಲ್ಲಿ. ದಿನಾಂಕ. ಒಂದು ಬರೆದ ಚೆಕ್ಕಿನ ಹಾಳೆಗೆ ಇರುವ ವಾಯಿದೆ ಮೂರು ತಿಂಗಳು ಮಾತ ಹಣ ಪಾವತಿಸುವ ವಿಧ (ಸ್ವಂತ, *ಹೆಸರಿಗೆ ಮತ್ತು ಖಾತೆಯಿಂದ ಖಾತೆಗೆ). ಚೆಕ್ ಹಾಳೆಯಲ್ಲಿ ತಿದ್ದುಪಡಿಗೆ ಅವಕಾಶವೇ ಇಲ್ಲ ಈ ಎಲ್ಲ ಅಂಶಗಳನ್ನು ಪಾಲಿಸಿದರೆ ಬ್ಯಾಂಕಿನಲ್ಲಿರುವ ಸದ್ರಿ ಖಾತೆಯಿಂದ ಹಣ ಬಿಡುಗಡೆಯಾಗುವುದು. ಹೀಗೆ ಬ್ಯಾಂಕಿನಿಂದ ಹಣವನ್ನು ಚೆಕ್ ಮುಖಾಂತರ ಪಡೆಯುವುದು ಸುರಕ್ಷಿತ ಮಾರ್ಗ. ಚೆಕ್ ಪುಸ್ತಕದಲ್ಲಿ ಪ್ರತಿ ಹಾಳೆಯಲ್ಲಿ ಸಂಖ್ಯೆಗಳನ್ನು ನೀಡಲಾಗಿದೆ. ಆ ಸಂಖ್ಯೆಯ ಚೆಕ್ಕನ್ನು ಒಬ್ಬ ವ್ಯಕ್ತಿಗೆ ನೀಡಿದಾಗ, ಆ ವ್ಯಕ್ತಿ ಹಣವನ್ನು ಬ್ಯಾಂಕಿನ ಖಾತೆಯಿಂದ ತೆಗೆಯಬಹುದು. ಚೆಕ್ ಹಾಳೆಯಲ್ಲಿ ಐ.ಎಫ಼್.ಎಸ್.ಸಿ ಸಂಖ್ಯೆಯಲ್ಲಿ ಯಾವ ಬ್ಯಾಂಕ್ ಮತ್ತು ಯವುದು ಶಾಖೆಯೆಂಬುದು ಸುಲಭವಾಗಿ ತಿಳಿಯುತ್ತದೆ. .